loader
Back to Homepage
ಶಕ್ತಿ ತುಂಬಿದ ರುದ್ರಾಕ್ಷವನ್ನು ಉಚಿತವಾಗಿ ಮನೆಗೇ ತಲುಪಿಸಲಾಗುತ್ತದೆ
ರುದ್ರಾಕ್ಷ ಅಂದರೆ ಶಿವನ ಆನಂದಭಾಷ್ಪ. ರುದ್ರಾಕ್ಷ ದೀಕ್ಷೆ ಮಹಾಶಿವರಾತ್ರಿಯಂದು ಸದ್ಗುರುಗಳಿಂದ ಪ್ರತಿಷ್ಠಾಪಿಸಲ್ಪಡುವ ಶಕ್ತಿಯುತ ರುದ್ರಾಕ್ಷವನ್ನು ಒಳಗೊಂಡಿರುತ್ತದೆ. ರುದ್ರಾಕ್ಷ ದೀಕ್ಷೆಯನ್ನು ಪಡೆಯುವ ಮೂಲಕ ನಿಮ್ಮ ಮನೆಯಲ್ಲಿ ಶಿವನ ಅನುಗ್ರಹವನ್ನು ಸ್ವೀಕರಿಸಿ.
ರುದ್ರಾಕ್ಷ ದೀಕ್ಷೆಯನ್ನು ಯಾರು ಸ್ವೀಕರಿಸಬಹುದು?
ಗೃಹಸ್ಥರನ್ನೊಳಗೊಂಡು ಎಲ್ಲರೂ ಸ್ವೀಕರಿಸಬಹುದು
ಯಾವುದೇ ನಿಬಂಧನೆಗಳಿಲ್ಲ
ರುದ್ರಾಕ್ಷದ ಪ್ರಯೋಜನಗಳು
ಶಾರೀರಿಕ ಮತ್ತು ಮಾನಸಿಕ ಸ್ಥಿರತೆ ತರುವಲ್ಲಿ ಬೆಂಬಲ
ಧ್ಯಾನಸ್ಥರಾಗಲು ಅನುಕೂಲ
ಔರಾ ಶುದ್ಧೀಕರಣ
ನಕಾರಾತ್ಮಕ ಹಾಗು ದುಷ್ಟ ಶಕ್ತಿಗಳನ್ನು ತಡೆಯಲು
ನೋಂದಣಿ ಮುಕ್ತಾಯವಾಗಿದೆ
“ರುದ್ರಾಕ್ಷ ದೀಕ್ಷೆ ಆದಿಯೋಗಿಯ ಅನುಗ್ರಹವನ್ನು ಪಡೆಯಲು ಒಂದು ಶಕ್ತಿಯುತ ಸಾಧನ”
-ಸದ್ಗುರು
ರುದ್ರಾಕ್ಷ ದೀಕ್ಷೆಯ ಅರ್ಪಣೆಗಳು
ರುದ್ರಾಕ್ಷ
ಇದನ್ನು ಧರಿಸುವವರು ಹಲವು ರೀತಿಯಲ್ಲಿ ಶಾರೀರಿಕ, ಮಾನಸಿಕ ಹಾಗು ಆಧ್ಯಾತ್ಮಿಕ ಪ್ರಯೋಜನಗಳನ್ನು ಪಡೆಯಬಹುದು
ಈಶಾ ವಿಭೂತಿ
ಧ್ಯಾನಲಿಂಗದಲ್ಲಿ ಪ್ರತಿಷ್ಠಾಪಿಸಲ್ಪಟ್ಟ ಪವಿತ್ರ ಭಸ್ಮ
ಅಭಯ ಸೂತ್ರ
ನಿಮ್ಮಲ್ಲಿರುವ ಭಯವನ್ನು ಹೋಗಲಾಡಿಸಿ ನಿಮ್ಮ ಇಚ್ಛೆಗಳನ್ನು ನೆರವೇರಿಸಲು ವಿಶೇಷವಾಗಿ ಪ್ರತಿಷ್ಠಾಪಿಸಲ್ಪಟ್ಟ ದಾರ.
ಆದಿಯೋಗಿ ಚಿತ್ರ
ಮಾನವೀಯತೆಗೆ, “ಒಳಮುಖರಾಗುವುದೇ ಬಿಡುಗಡೆಯ ಏಕೈಕ ಮಾರ್ಗ” ಎಂಬುದರ ಶಕ್ತಿಯುತ ಸ್ಪೂರ್ತಿ ಮತ್ತು ನೆನಪು.
ನೀವು ಸ್ವೀಕರಿಸಿದ ಈ ಅರ್ಪಣೆಗಳನ್ನು ಯಾವ ರೀತಿ ಬಳಸಬೇಕು ಎಂಬುದರ ಕುರಿತು ಮಾರ್ಗದರ್ಶನವನ್ನು ಇದರ ಜೊತೆಗೆ ಕಳುಹಿಸಲಾಗುವುದು.
ರುದ್ರಾಕ್ಷದ ದಂತಕತೆ
ರುದ್ರ ಅಂದರೆ ಶಿವ ಮತ್ತು ಅಕ್ಷ ಅಂದರೆ ಕಣ್ಣೀರು. ರುದ್ರಾಕ್ಷ ಅಂದರೆ ಶಿವನ ಆನಂದಭಾಷ್ಪ. ದಂತಕತೆಯ ಪ್ರಕಾರ ಶಿವ ದೀರ್ಘಾವಧಿ ಕಾಲ ಧ್ಯಾನದಲ್ಲಿ ಕುಳಿತುಕೊಂಡಾಗ ಅವನ ಪರಮಾನಂದ ಎಷ್ಟರ ಮಟ್ಟಕ್ಕೆ ತಲುಪುತ್ತದೆಯೆಂದರೆ, ಅದು ಅವನನ್ನು ಸಂಪೂರ್ಣವಾಗಿ ನಿಶ್ಚಲಗೊಳಿಸಿತು, ಅವನಲ್ಲಿ ಯಾವುದೇ ರೀತಿಯ ಚಲನೆ ಕಾಣಲಿಲ್ಲ. ಅವನಲ್ಲಿ ಉಸಿರಾಟವೂ ಇಲ್ಲ ಎಂಬಂತೆ ಭಾಸವಾಗುತ್ತಿತ್ತು ಮತ್ತು ಎಲ್ಲರೂ ಅವನು ಸಾವನ್ನಪಿರಬಹುದು ಎಂದೇ ತಿಳಿದಿದ್ದರು. ಅವನು ಜೀವಿಸಿದ್ದಾನೆ ಎಂಬುದಕ್ಕೆ ಒಂದೇ ಒಂದು ಸಂಕೇತವಿತ್ತು – ಅವನ ಕಣ್ಣಿನಿಂದ ಸುರಿಯುತ್ತಿದ್ದ ಆನಂದಭಾಷ್ಪ. ಈ ಕಣ್ಣಿರು ಭೂಮಿಯ ಮೇಲೆ ಬಿದ್ದು, ಅದುವೇ ರುದ್ರಾಕ್ಷವಾಯಿತು.
ರುದ್ರಾಕ್ಷ ದೀಕ್ಷೆಯನ್ನು ಹಂಚಿಕೊಳ್ಳಿ
ನಿಮ್ಮ ಕುಟುಂಬವರ್ಗ ಮತ್ತು ಸ್ನೇಹಿತರಿಗೆ ಈ ಅವಕಾಶವನ್ನು ಉಡುಗೊರೆಯಾಗಿ ನೀಡಿ ಮತ್ತು ಅವರ ಜೀವನದಲ್ಲಿ ಅಧ್ಯಾತ್ಮದ ಒಂದು ಹನಿ ತಲುಪುವಂತೆ ಮಾಡಿ.
ಸಂಭ್ರಮಭರಿತ ಈಶಾ ಮಹಾಶಿವರಾತ್ರಿ 2024 ಆಚರಣೆಯಲ್ಲಿ ಪಾಲ್ಗೊಳ್ಳಲು ಮರೆಯದಿರಿ.
8 March 2024
ಸಂಜೆ 6 ರಿಂದ ಬೆಳಿಗ್ಗೆ 6 ರವರೆಗೆ (ಭಾರತೀಯ ಕಾಲಮಾನ) .
ರುದ್ರಾಕ್ಷ ದೀಕ್ಷೆಯ ಬಗ್ಗೆ