ಮಹಾಶಿವರಾತ್ರಿ ಸಮೀಪಿಸುತ್ತಿದ್ದಂತೆ, ಪ್ರಪಂಚದ ಯಾವುದೇ ಭಾಗದಲ್ಲಿರುವವರು ಕೂಡ, ಆದಿಯೋಗಿಯ ಅನುಗ್ರಹಕ್ಕೆ ಪಾತ್ರರಾಗಬೇಕು ಎಂದು ಸದ್ಗುರುಗಳು ಆಶಿಸಿದ್ದಾರೆ. ಆದಿಯೋಗಿಯ ಅನುಗ್ರಹವನ್ನು ಪಡೆಯುವ ಒಂದು ಮಾರ್ಗವೆಂದರೆ ರುದ್ರಾಕ್ಷ ದೀಕ್ಷೆ. ಇದು ವಿಶೇಷವಾಗಿ ವಿನ್ಯಾಸಗೊಳಿಸಲಾದ ಸಾಧನವಾಗಿದ್ದು, ನೀವು ಹೆಚ್ಚು ಪ್ರಜ್ಞಾವಂತರಾಗಲು ಮತ್ತು ಅನುಗ್ರಹಕ್ಕೆ ಲಭ್ಯವಾಗಲು ಪ್ರಬಲ ಮಾರ್ಗ. ನಿಮ್ಮ ದೇಹ, ಮನಸ್ಸು ಮತ್ತು ಶಕ್ತಿಯನ್ನು ಶಿವನ ಆನಂದಭಾಷ್ಪದಲ್ಲಿ ನೆನೆಸುವ ಒಂದು ಅವಕಾಶವೇ ಈ ರುದ್ರಾಕ್ಷ ದೀಕ್ಷೆ .
ನೀವು ಆನ್ಲೈನ್ ಮೂಲಕ ನೋಂದಾಯಿಸಬಹುದು. https://mahashivarathri.org/kn/rudraksha-diksha
ನಾವು ವಾಟ್ಸಾಪ್ ಮತ್ತು ಮಿಸ್ಡ್-ಕಾಲ್ ಅಲರ್ಟ್ ಸಿಸ್ಟಮ್ ಮೂಲಕ ನೋಂದಣಿ ಪ್ರಕ್ರಿಯೆಗೆ ಅವಕಾಶವಾಗುವಂತೆ ಪ್ರಕ್ರಿಯೆಯನ್ನು ಜಾರಿಗೆ ತರುತ್ತಿದ್ದೇವೆ. ಪ್ರಕ್ರಿಯೆ ಇನ್ನೂ ಪ್ರಗತಿಯಲ್ಲಿದೆ. ಹೆಚ್ಚಿನ ಮಾಹಿತಿಯನ್ನು ನಮ್ಮ ವೆಬ್ಸೈಟ್ನ ಮೂಲಕ ತಿಳಿಸುತ್ತೇವೆ. ನೀವೂ ಸಹ ರುದ್ರಾಕ್ಷ ದೀಕ್ಷೆಯನ್ನು ನಿಮ್ಮ ಸ್ನೇಹಿತರು ಹಾಗು ಕುಟುಂಬದವರೊಂದಿಗೆ ಹಂಚಿಕೊಳ್ಳಬಹುದು.
ಇಲ್ಲ. ರುದ್ರಾಕ್ಷ ದೀಕ್ಷೆಯನ್ನು ಉಚಿತವಾಗಿ ಅರ್ಪಿಸಲಾಗುತ್ತಿದೆ. ಇದನ್ನು ನಿಮ್ಮ ಮನೆಗೆ ಉಚಿತವಾಗಿ ತಲುಪಿಸಲಾಗುವುದು. ಇದು ಆದಿಯೋಗಿಯ ಅನುಗ್ರಹವನ್ನು ಸ್ವೀಕರಿಸಲು ಸದ್ಗುರುಗಳು ಅರ್ಪಿಸುತ್ತಿರುವ ಒಂದು ಸಾಧನ.
10 ಲಕ್ಷಕ್ಕೂ ಹೆಚ್ಚು ಪ್ರತಿಷ್ಠಾಪಸಲ್ಪಟ್ಟ ರುದ್ರಾಕ್ಷ ಬೀಜಗಳನ್ನು ಪ್ರಪಂಚದಾದ್ಯಂತ ಉಚಿತವಾಗಿ ಹಂಚಲು ಸಿದ್ದಪಡಿಸಲಾಗಿದೆ. ಇದರ ಜೊತೆಗೆ ನಿಮ್ಮ ಸಾಧನೆಗೆ ಅನುಕೂಲವಾಗಲು ಕಲವು ವಸ್ತುಗಳನ್ನು ಕಳುಹಿಸಿಕೊಡಲಾಗುವುದು.
ನಿಮ್ಮ ಶಕ್ತ್ಯಾನುಸಾರ ದೇಣಿಗೆ ನೀಡುವ ಮೂಲಕ ನೀವು ಇನ್ನಷ್ಟು ಜನರಿಗೆ ರುದ್ರಾಕ್ಷ ದೀಕ್ಷೆಯನ್ನು ಅರ್ಪಿಸಲು ಸಹಾಯ ಮಾಡಬಹುದು. ಈ ರೀತಿ ಅವರ ಜೀವನದಲ್ಲಿ ಅದ್ಯಾತ್ಮದ ಒಂದು ಹನಿಯನ್ನು ತಲುಪಿಸುವಲ್ಲಿ ನೀವು ಪಾತ್ರವಹಿಸಬಹುದು.
ರುದ್ರಾಕ್ಷ ದೀಕ್ಷೆಯ ಅಂಗವಾಗಿ, ನಿಮಗೆ ಒಂದು ರುದ್ರಾಕ್ಷದ ಅವಶ್ಯಕತೆ ಮಾತ್ರವೇ ಇರುವುದು. ಆದರೂ, ಒಂದು ಮೊಬೈಲ್ ಸಂಖ್ಯೆಗೆ ತಲಾ ಮೂರು ರುದ್ರಾಕ್ಷಗಳನ್ನು ಪಡೆಯುವ ಮೂಲಕ ನಿಮ್ಮ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಹಂಚಿಕೊಳ್ಳಬಹದು.
ಖಂಡಿತವಾಗಿಯೂ. ನೀವು ರುದ್ರಾಕ್ಷ ದೀಕ್ಷೆಯ ಈ ಸಾಧ್ಯತೆಯನ್ನು ನಿಮ್ಮ ಇಚ್ಛಾನುಸಾರ ಇನ್ನಷ್ಟು ಜನರಿಗೆ ನೀಡುವ ಮೂಲಕ ಅವರ ಜೀವನದಲ್ಲಿ ಆಧ್ಯಾತ್ಮಧ್ಮಿಕತೆಯನ್ನು ತಲುಪಿಸುವಲ್ಲಿ ಸಹಾಯವಾಗಬಹುದು.
ನೀವು “ರುದ್ರಾಕ್ಷ ಸೇವೆ” ಯಲ್ಲಿ ನೋಂದಾಯಿಸಿಕೊಳ್ಳುವ ಮೂಲಕ, ಎಲ್ಲರಿಗೂ ರುದ್ರಾಕ್ಷ ದೀಕ್ಷೆಯನ್ನು ಅರ್ಪಿಸಬಹುದು. ಈ ವೆಬ್ಸೈಟ್ನಲ್ಲಿ ಇದರ ವಿವರಗಳನ್ನು ಶೀಘ್ರದಲ್ಲೇ ತಿಳಿಸಲಾಗುತ್ತದೆ.
ನೀವು ರುದ್ರಾಕ್ಷ ದೀಕ್ಷೆಯ ವಿವರಗಳನ್ನು ನಿಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ವಾಟ್ಸಾಪ್, ಫೇಸ್ಬುಕ್ ಅಥವಾ ಟ್ವಿಟರ್ ಮೂಲಕವೂ ಹಂಚಿಕೊಳ್ಳಬಹುದು:
ಹೌದು. ಸದ್ಗುರುಗಳು ಮೊಟ್ಟ ಮೊದಲ ಬಾರಿಗೆ ರುದ್ರಾಕ್ಷ ದೀಕ್ಷೆಯ ಅವಕಾಶವನ್ನು ಕೊಟ್ಟಿದ್ದಾರೆ. ಇದರ ಮೂಲಕ ರುದ್ರಾಕ್ಷದ ಜೊತೆಗೆ ವಿಭೂತಿ, ಅಭಯಸೂತ್ರ ಮತ್ತು ಆದಿಯೋಗಿಯ ಚಿತ್ರವನ್ನು ಪಡೆಯಬಹುದು.
ಇಲ್ಲ. ಹೊರದೇಶಗಳಿಗೆ ರವಾನೆ ಮಾಡಲು ಹಲವು ಸವಾಲುಗಳು ಇರುವುದರಿಂದ, ಸದ್ಯಕ್ಕೆ ರುದ್ರಾಕ್ಷ ದೀಕ್ಷೆ ಭಾರತಕ್ಕಷ್ಟೇ ಅವಕಾಶ ಮಾಡಿಕೊಡಲಾಗಿದೆ.
ರುದ್ರಾಕ್ಷ ದೀಕ್ಷೆಯ ಪ್ಯಾಕೇಜ್ ಮಹಾಶಿವರಾತ್ರಿಯ ನಂತರ 4 ರಿಂದ 8 ವಾರದೊಳಗೆ ತಲುಪಿಸಲಾಗುವುದು. ದೂರಪ್ರದೇಶಗಳು ಮತ್ತು ಕೊರಿಯರ್ ಸೇವೆ ಇಲ್ಲದೆ ಪಾಲುದಾರ ಸಂಸ್ಥೆಗಳಿಂದ ಸೇವೆ ಪಡೆಯುತ್ತಿರುವಂತಹ ಪ್ರದೇಶಗಳಿಗೆ ತಲುಪಲು ವಿಳಂಬವಾಗಬಹುದು.
ಹೌದು. ರವಾನೆಯಾದ ನಂತರ ನೀವು ಎಸ್ ಎಮ್ ಎಸ್ ಅನ್ನು ಸ್ವೀಕರಿಸುತ್ತೀರಿ. ಅದರಿಂದ ನಿಮ್ಮ ರುದ್ರಾಕ್ಷ ದೀಕ್ಷೆಯ ಪ್ಯಾಕೇಜ್ ಅನ್ನು ನೀವು ಇಲ್ಲಿ ಟ್ರ್ಯಾಕ್ ಮಾಡಬಹುದು. isha.sadhguru.org/mahashivratri
ರುದ್ರಾಕ್ಷ ದೀಕ್ಷೆಯ ನೋಂದಣಿ ಅಥವಾ ಅದರ ಸ್ವೀಕೃತಿಯ ಕುರಿತು ಪ್ರಶ್ನೆಗಳಿದ್ದಲ್ಲಿ, ಭಾರತದಲ್ಲಿ ವಾಸವಾಗಿರುವವರು rudraksh.diksha@ishafoundation.org ಮೂಲಕ ಸಂಪರ್ಕಿಸಬಹುದು.
ದೇಣಿಗೆ ಸಂಬಂಧಿತ ಪ್ರಶ್ನೆಗಳಿಗೆ, ನೀವು rudrakshdiksha.payment@ishafoundation.org ಗೆ ಈ-ಮೇಲ್ ಮಾಡಬಹುದು
ಕಳುಹಿಸುವ ಮೊದಲು, ಎಲ್ಲ ವಸ್ತುಗಳನ್ನೂ ಕೂಲಂಕುಶವಾಗಿ ಪರಿಶೀಲಿಸಲಾಗಿರುತ್ತದೆ. ಆದರೂ, ಸಾಗಣೆಯ ಸಂದರ್ಭದಲ್ಲಿ ಕೆಲವು ಅಚಾತುರ್ಯದಿಂದ ರುದ್ರಾಕ್ಷಕ್ಕೆ ಹಾನಿಯಾಗಿದ್ದಲ್ಲಿ, ದಯವಿಟ್ಟು ಅದನ್ನು ಬಳಸಬೇಡಿ. ಅಂತಹ ಸಂದರ್ಭದಲ್ಲಿ, ಒಮ್ಮೆ ನಮ್ಮನ್ನು ಸಂಪರ್ಕಿಸಿ.
ರುದ್ರಾಕ್ಷ ದೀಕ್ಷೆಯ ಪ್ಯಾಕೇಜ್ ಹಾನಿಯಾಗಿದ್ದಲ್ಲಿ, ದಯವಿಟ್ಟು ಸಹಾಯಕ್ಕಾಗಿ ನಮ್ಮನ್ನು ಸಂಪರ್ಕಿಸಿ. ಯಾವುದೇ ಕಾರಣಕ್ಕೆ ನೀವು ಅದನ್ನು ಬಳಸಲು ಇಚ್ಛಿಸದೆ, ಮರಳಿಸಲು ಬಯಸಿದರೆ, ದಯವಿಟ್ಟು ಅದನ್ನು ನಮಗೆ ಕಳುಹಿಸಿ.
ರುದ್ರಾಕ್ಷ ದೀಕ್ಷೆಯ ನೋಂದಣಿ ಅಥವಾ ಅದರ ಸ್ವೀಕೃತಿಯ ಕುರಿತು ಪ್ರಶ್ನೆಗಳಿದ್ದಲ್ಲಿ, ಭಾರತದಲ್ಲಿ ವಾಸವಾಗಿರುವವರು rudraksh.diksha@ishafoundation.org ಗೆ ಈ-ಮೇಲ್ ಕಳುಹಿಸುವ ಮೂಲಕ ನಮ್ಮನ್ನು ಸಂಪರ್ಕಿಸಬಹುದು.
ಹೌದು. ಇತರ ರುದ್ರಾಕ್ಷದ ಜೊತೆಗೆ ಇದನ್ನು ಧರಿಸಬಹುದು.
ಹಿಂದಿನ ವರ್ಷಗಳಲ್ಲಿ ನೀಡುತ್ತಿದ್ದ ರುದ್ರಾಕ್ಷಗಳು ಆದಿಯೋಗಿಯನ್ನು ಕೆಲದಿನಗಳ ಕಾಲ ಅಲಂಕರಿಸಿದ್ದವು.
ರುದ್ರಾಕ್ಷ ದೀಕ್ಷೆಯ ಅಂಗವಾಗಿ ನೀಡಲಾಗುತ್ತಿರುವ ರುದ್ರಾಕ್ಷವು ಸದ್ಗುರುಗಳಿಂದ ಈ ಮಹಾಶಿವರಾತ್ರಿಯಂದು ವಿಶೇಷ ರೀತಿಯಲ್ಲಿ ಪ್ರತಿಷ್ಠಾಪಿಸಲಾಗುತದೆ.
ರುದ್ರಾಕ್ಷ ದೀಕ್ಷೆಯ ಅಂಗವಾಗಿ, ನಿಮಗೆ ಒಂದೇ ರುದ್ರಾಕ್ಷದ ಅವಶ್ಯಕತೆ ಇರುವುದು. ಆದರೂ, ನೀವು ಪ್ರತೀ ನೋಂದಣಿಗೆ ಎರಡು ರುದ್ರಾಕ್ಷಗಳನ್ನು ಪಡೆಯುವ ಮೂಲಕ ನಿಮ್ಮ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಹಂಚಿಕೊಳ್ಳಬಹದು.
ರುದ್ರಾಕ್ಷ ದೀಕ್ಷೆಯನ್ನು ಮಹಾಶಿವರಾತ್ರಿಯ ಸಮಯದಲ್ಲಿ ಲಕ್ಷಾಂತರ ಭಕ್ತಾಧಿಗಳಿಗೆ ನೀಡಲಾಗುವುದು. ದೊಡ್ಡ ಪ್ರಮಾಣದಲ್ಲಿ ರುದ್ರಾಕ್ಷಗಳನ್ನು ರವಾನಿಸಬೇಕಿರುವುದರಿಂದ ನಿಮ್ಮ ಪ್ಯಾಕೇಜ್ ಅನ್ನು ರವಾನಿಸಲು ಕೆಲವು ತಿಂಗಳುಗಳು ಬೇಕಾಗಬಹುದು.
ನಿಮ್ಮ ಸಹಕಾರ ಮತ್ತು ತಾಳ್ಮೆಯನ್ನು ನಾವು ಕೋರುತ್ತೇವೆ. ರುದ್ರಾಕ್ಷವನ್ನು ಅಂಚೆಯ ಮೂಲಕ ಕಳುಹಿಸಲಾಗುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ.
ರುದ್ರಾಕ್ಷ ಬೀಜಗಳು, ಎಲಿಯೊಕಾರ್ಪಸ್ ಗ್ಯಾನಿಟ್ರಸ್ ಎಂಬ ಮರದ ಒಣ ಬೀಜಗಳು. ಈ ಮರಗಳು ಸಾಮಾನ್ಯವಾಗಿ ಆಗ್ನೇಯ ಏಷ್ಯಾದ ಆಯ್ದ ಸ್ಥಳಗಳಲ್ಲಿ, ಮುಖ್ಯವಾಗಿ ಭಾರತ ಉಪಖಂಡದ ಹಿಮಾಲಯ ಪರ್ವತ ಶ್ರೇಣಿಯಲ್ಲಿ ಬೆಳೆಯುತ್ತದೆ. ರುದ್ರಾಕ್ಷ ಎಂಬ ಪದದ ಅರ್ಥ “ಶಿವನ ಆನಂದಭಾಷ್ಪ.”
ದೈಹಿಕ ಮತ್ತು ಮಾನಸಿಕ ಸಮತೋಲನವನ್ನು ಕಾಪಾಡಿಕೊಳ್ಳಲು ರುದ್ರಾಕ್ಷ ಬಹಳ ಸಹಕಾರಿ. ರುದ್ರಾಕ್ಷ ರಕ್ತದೊತ್ತಡವನ್ನು ಕಡಿಮೆ ಮಾಡಲು, ನರಗಳನ್ನು ಶಾಂತಗೊಳಿಸಲು ಮತ್ತು ಚರ್ಮದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದರ ಕೆಲವು ಸೂಕ್ಷ್ಮ ಪ್ರಯೋಜನಗಳೆಂದರೆ, ಅಂತಃಪ್ರಜ್ಞೆಯ ವರ್ಧನೆ, ಧ್ಯಾನಸ್ಥರಾಗಲು ಬೆಂಬಲ, ಔರಾ ಶುದ್ಧೀಕರಣ ಮತ್ತು ನಕಾರಾತ್ಮಕ ಶಕ್ತಿಗಳ ವಿರುದ್ಧ ರಕ್ಷಣೆ ಒದಗಿಸುವುದು.
ವಯಸ್ಸು, ಲಿಂಗ, ದೈಹಿಕ ಸ್ಥಿತಿ, ಸಂಸ್ಕೃತಿ, ಜನಾಂಗೀಯತೆ, ಭೌಗೋಳಿಕ ಅಥವಾ ಧಾರ್ಮಿಕ ಹಿನ್ನೆಲೆ- ಇದಾವದನ್ನೂ ಲೆಕ್ಕಿಸದೆ ಎಲ್ಲರೂ, ಜೀವನದ ಯಾವುದೇ ಹಂತದಲ್ಲಿ, ಇಲ್ಲಿ ಅರ್ಪಿಸಲಾಗುತ್ತಿರುವ ರುದ್ರಾಕ್ಷವನ್ನು ಧರಿಸಬಹುದು. ವಿಶೇಷವಾಗಿ ಮಕ್ಕಳು, ವಿದ್ಯಾರ್ಥಿಗಳು ಮತ್ತು ವೃದ್ಧರು ಧರಿಸುವುದು ಹೆಚ್ಚು ಪ್ರಯೋಜನಕಾರಿಯಾಗಿದೆ.
ರುದ್ರಾಕ್ಷವನ್ನು ಯಾವಾಗಲೂ ನಿಮ್ಮ ಕುತ್ತಿಗೆಯಲ್ಲಿ ಧರಿಸಬೇಕು.
ನೀವು ತಣ್ಣೀರಿನಲ್ಲಿ ಸ್ನಾನ ಮಾಡುತ್ತಿದ್ದರೆ ಮತ್ತು ಯಾವುದೇ ರೀತಿಯ ರಾಸಾಯನಿಕ ಸಾಬೂನು/ಶ್ಯಾಂಪೂ ಬಳಸದಿದ್ದರೆ, ನಿಮ್ಮ ದೇಹದ ಮೇಲೆ ರುದ್ರಾಕ್ಷದ ನೀರು ಹರಿದರೆ ಒಳ್ಳೆಯದೇ. ಆದರೆ ನೀವು ರಾಸಾಯನಿಕ ಸಾಬೂನು ಮತ್ತು ಬಿಸಿ ನೀರನ್ನು ಬಳಸುತ್ತಿದ್ದರೆ, ಬೀಜಗಳು ಗಡಸಾಗುತ್ತವೆ ಮತ್ತು ಕೆಲ ಸಮಯದ ನಂತರ ಬಿರುಕು ಬಿಡುತ್ತದೆ, ಆದ್ದರಿಂದ ಅಂತಹ ಸಮಯದಲ್ಲಿ ಅದನ್ನು ಧರಿಸದಿರುವುದು ಉತ್ತಮ. ಸ್ನಾನ ಮಾಡುವಾಗ ದಯವಿಟ್ಟು ರುದ್ರಾಕ್ಷವನ್ನು ಬಟ್ಟೆಯ ಮೇಲೆ ಇರಿಸಿ.
ಹೌದು. ರುದ್ರಾಕ್ಷವನ್ನು ಎಲ್ಲರೂ ಎಲ್ಲ ಸಮಯದಲ್ಲೂ ಧರಿಸಬಹುದು.
ಕೆಲವು ಕಾರಣಗಳಿಗಾಗಿ, ನೀವು ರುದ್ರಾಕ್ಷವನ್ನು ಧರಿಸಲು ಸಾಧ್ಯವಾಗದಿದ್ದರೆ, ಅದನ್ನು ಸುರಕ್ಷಿತವಾಗಿ ಇಡಬೇಕು. ಅದನ್ನು ಹತ್ತಿ ಅಥವಾ ರೇಷ್ಮೆಯಂತಹ ನೈಸರ್ಗಿಕ ಬಟ್ಟೆಯಲ್ಲಿ ಸುತ್ತಿಡಬೇಕು. ದಯವಿಟ್ಟು ಅದನ್ನು ಲೋಹದ ಪಾತ್ರೆಯಲ್ಲಿ ಇಡಬೇಡಿ.
ರುದ್ರಾಕ್ಷವನ್ನು ಧರಿಸುವ ಮೊದಲು ಸುಸ್ಥಿತಿಯಲ್ಲಿಡಲು ಕೆಲವು ಪ್ರಕ್ರಿಯೆಗಳನ್ನು ಮಾಡುವುದು ಮುಖ್ಯ. ಹೊಸ ರುದ್ರಾಕ್ಷ ಬೀಜಗಳನ್ನು ಸುಸ್ಥಿತಿಯಲ್ಲಿಡಲು, ಅವುಗಳನ್ನು ತುಪ್ಪದಲ್ಲಿ (ಬೆಣ್ಣೆ ಕಾಯಿಸಿದ ತುಪ್ಪ) 24 ಗಂಟೆಗಳ ಕಾಲ ನೆನೆಸಿ ನಂತರ ಕಾಯಿಸದ ಹಸಿ ಹಾಲಿನಲ್ಲಿ ಇನ್ನೊಂದು 24 ಗಂಟೆಗಳ ಕಾಲ ನೆನೆಸಿಡಿ. ನಂತರ ಅವುಗಳನ್ನು ನೀರಿನಿಂದ ತೊಳೆಯಿರಿ ಮತ್ತು ಸ್ವಚ್ಚವಾದ ಬಟ್ಟೆಯಿಂದ ಒರೆಸಿ. ಸೋಪ್ ಅಥವಾ ಇತರ ರಾಸಾಯನಿಕಗಳೊಂದಿಗೆ ಅವುಗಳನ್ನು ತೊಳೆಯಬೇಡಿ. ಆರು ತಿಂಗಳಿಗೊಮ್ಮೆ ಈ ಪ್ರಕ್ರಿಯೆ ಮಾಡಬೇಕು.
ತಾಮ್ರ ಒಂದು ನಿರ್ದಿಷ್ಟ ರೀತಿಯ ಶಕ್ತಿಯನ್ನು ತರುವ ಮೂಲಕ ಧ್ಯಾನಸ್ಥರಾಗಲು ಬೆಂಬಲವಾಗಿರುತ್ತದೆ. ನಿಮ್ಮ ದೇಹದೊಂದಿಗೆ ಅದರ ಸಂಪರ್ಕ ಹೊಂದುವುದರಿಂದ ನಿಮ್ಮ ಶಕ್ತಿ ವ್ಯವಸ್ಥೆಯನ್ನು ಹೆಚ್ಚಿಸಬಹುದು ಮತ್ತು ಸ್ಥಿರತೆ ತಂದುಕೊಳ್ಳಬಹುದು.
ನೀವು ರುದ್ರಾಕ್ಷದ ಎರಡೂ ಬದಿಯಲ್ಲಿ ಗಂಟು ಕಟ್ಟುತ್ತಿದ್ದರೆ, ಅದನ್ನು ತುಂಬಾ ಬಿಗಿಯಾಗಿ ಕಟ್ಟದಂತೆ ಎಚ್ಚರ ವಹಿಸಬೇಕು ಏಕೆಂದರೆ ಇದರಿಂದ ರುದ್ರಾಕ್ಷದ ಒಳಭಾಗದಲ್ಲಿ ಬಿರುಕು ಉಂಟಾಗಬಹುದು. ಒತ್ತಡದ ಕಾರಣ ಒಳಗಿನಿಂದ ಬಿರುಕು ಬಿಟ್ಟಿರುವ ರುದ್ರಾಕ್ಷವನ್ನು ಧರಿಸಬಾರದು. ಅಲ್ಲದೆ, ರುದ್ರಾಕ್ಷವನ್ನು ಎರಡೂ ಕಡೆಗಳಲ್ಲಿ ಲೋಹದಿಂದ ಮುಚ್ಚದಂತೆ ನೋಡಿಕೊಳ್ಳಿ.
https://isha.sadhguru.org/in/en/wisdom/article/the-significance-of-rudraksha
ವಿಭೂತಿ, ಅಥವಾ ಪವಿತ್ರ ಭಸ್ಮ, ಶಿವನಿಗೆ ಬಹಳ ಹತ್ತಿರವಾದದ್ದು. ಆದ್ದರಿಂದಲೇ ಸಾಮಾನ್ಯವಾಗಿ ಶಿವನನ್ನು ತಲೆಯಿಂದ ಪಾದದವರೆಗೆ ಭಸ್ಮಧಾರಿಯಾಗಿ ಚಿತ್ರಿಸಲ್ಪಡುತ್ತದೆ. ಇದು ಜೀವನದ ನಶ್ವರತೆಯ ಸಂಕೇತ. ಜೀವನದ ನಶ್ವರತೆಯನ್ನು ಅರಿತುಕೊಳ್ಳುವುದೇ ಆಧ್ಯಾತ್ಮಿಕ ಪ್ರಕ್ರಿಯೆಯ ಮೂಲ ಉದ್ದೇಶ. ಇದರ ನಿರಂತರ ಸ್ಮರಣೆಯೇ ವಿಭೂತಿ. ಭಾರತೀಯ ಸಂಸ್ಕೃತಿಯಲ್ಲಿ, ಇದನ್ನು ಅಧ್ಯಾತ್ಮ ಅನ್ವೇಷಕರ ಪ್ರಬಲ ಸಾಧನವಾಗಿಯೂ ಬಳಸಲಾಗುತ್ತದೆ, ಏಕೆಂದರೆ ಇದನ್ನು ಸರಿಯಾಗಿ ತಯಾರಿಸಿ ದೇಹದ ಮೇಲೆ ಹಚ್ಚಿಕೊಂಡರೆ, ಗ್ರಹಿಕೆಯನ್ನು ಹೆಚ್ಚಿಸಲು ಮತ್ತು ಶಕ್ತಿಯನ್ನು ಸ್ವೀಕರಿಸಲು ಉತ್ತಮ ಮಾಧ್ಯಮವಾಗಿ ಕಾರ್ಯನಿರ್ವಹಿಸುತ್ತದೆ.
ಸಾಂಪ್ರದಾಯಿಕವಾಗಿ, ಯೋಗಿಗಳು ಸ್ಮಶಾನದಲ್ಲಿನ ಭಸ್ಮವನ್ನು ಬಳಸುತ್ತಾರೆ, ಆದರೆ ವಿಭೂತಿಯನ್ನು ಗೋವುಗಳ ಸಗಣಿ ಅಥವಾ ಬತ್ತದ ಹೊಟ್ಟಿನಿಂದಲೂ ತಯಾರಿಸಬಹುದು.
ಈಶಾ ವಿಭೂತಿಯನ್ನು ಧ್ಯಾನಲಿಂಗದ ಸನ್ನಿಧಿಯಲ್ಲಿ ಕೆಲವು ಸಮಯದ ಕಾಲ ಇಡುವುದರ ಮೂಲಕ ಪ್ರತಿಷ್ಠಾಪಿಸಲಾಗಿದೆ. ಇದರಿಂದ ವಿಭೂತಿಯು ಧ್ಯಾನಲಿಂಗದ ಶಕ್ತಿಯನ್ನು ಪಡೆದಿರುತ್ತದೆ.
ಸಾಂಪ್ರದಾಯಿಕವಾಗಿ, ವಿಭೂತಿಯನ್ನು ಉಂಗುರ ಬೆರಳು ಮತ್ತು ಹೆಬ್ಬೆರಳಿನ ನಡುವೆ ತೆಗೆದುಕೊಂಡು, ದೇಹದ ವಿವಿಧ ಭಾಗಗಳಿಗೆ ಹಚ್ಚಲಾಗುತ್ತದೆ: ಹುಬ್ಬುಗಳ ನಡುವೆ( ಆಜ್ಞಾ ಚಕ್ರ); ಗಂಟಲಿನ ಹಳ್ಳದಲ್ಲಿ (ವಿಶುದ್ಧಿ ಚಕ್ರ); ಮತ್ತು ಎದೆಯ ಮಧ್ಯಭಾಗದಲ್ಲಿ ಪಕ್ಕೆಲುಬುಗಳು ಸಂಧಿಸುವ ಜಾಗ (ಅನಾಹತ ಚಕ್ರ).
ವಿಭೂತಿಯನ್ನು ಆಜ್ಞಾದಲ್ಲಿ ಹಚ್ಚಿಕೊಳ್ಳುವುದರಿಂದ ಸ್ಪಷ್ಟತೆ ವರ್ಧಿಸುತ್ತದೆ, ವಿಶುದ್ಧಿಯಲ್ಲಿ ಹಚ್ಚಿಕೊಳ್ಳುವುದರಿಂದ ಜೀವದ ರೂಪದಲ್ಲಿ ನಿರ್ದಿಷ್ಟ ರೀತಿಯ ಶಕ್ತಿ ಮತ್ತು ಅನಾಹತದಲ್ಲಿ ಹಚ್ಚಿಕೊಳ್ಳುವ ಮೂಲಕ ಪ್ರೇಮ ಮತ್ತು ಭಕ್ತಿಯ ಆಯಾಮವನ್ನು ನಿಮ್ಮ ಜೀವನದಲ್ಲಿ ತಂದುಕೊಳ್ಳಬಹುದು.
ಅಭಯ ಸೂತ್ರವು ವಿಶೇಷ ಪವಿತ್ರವಾದ ದಾರವಾಗಿದ್ದು ಅದನ್ನು ಮಣಿಕಟ್ಟಿನ ಸುತ್ತಲೂ ಕಟ್ಟಿಕೊಳ್ಳಲಾಗುತ್ತದೆ. “ಅಭಯ” ಎಂದರೆ “ಭಯವಿಲ್ಲದಿರುವುದು”. ಒಬ್ಬರ ಭಯವನ್ನು ಹೋಗಲಾಡಿಸಲು ಮತ್ತು ಮಹತ್ವಾಕಾಂಕ್ಷೆಗಳನ್ನು ಪೂರೈಸುವಲ್ಲಿ ಅಭಯ ಸೂತ್ರವು ಬೆಂಬಲಿಸುತ್ತದೆ.
ಅಭಯ ಸೂತ್ರವನ್ನು ಹತ್ತಿಯ ದಾರದಿಂದ ತಯಾರಿಸಲಾಗಿದೆ
ಮಹಿಳೆಯರು ಇದನ್ನು ತಮ್ಮ ಎಡ ಮಣಿಕಟ್ಟಿನ ಸತ್ತಲೂ ಮತ್ತು ಪುರುಷರು ತಮ್ಮ ಬಲ ಮಣಿಕಟ್ಟಿನ ಸತ್ತಲೂ ಧರಿಸಬೇಕು. ಇದನ್ನು ಕನಿಷ್ಠ 40 ದಿನಗಳವರೆಗೆ ಧರಿಸಿರಬೇಕು. ಅದರ ಗಂಟನ್ನು ಬಿಚ್ಚುವ ಮೂಲಕ ಅಥವಾ ಸುಡುವ ಮೂಲಕ ತೆಗೆಯಬಹುದು (ದಯವಿಟ್ಟು ಅದನ್ನು ಕತ್ತರಿಸಬೇಡಿ) ಮತ್ತು ಅದನ್ನು ಒದ್ದೆಯಾದ ಮಣ್ಣಿನಲ್ಲಿ ಹೂತುಹಾಕುವುದರ ಮೂಲಕ ವಿಸರ್ಜಿಸಬಹುದು ಅಥವಾ ಅದನ್ನು ಸುಟ್ಟು ಅದರಿಂದಾದ ಭಸ್ಮವನ್ನು ನಿಮ್ಮ ವಿಶುದ್ಧಿಯಿಂದ (ಗಂಟಲಿನ ಹಳ್ಳ) ಅನಾಹತಕ್ಕೆ (ಪಕ್ಕೆಲುಬುಗಳು ಸಂಧಿಸುವ ಜಾಗದಲ್ಲಿ) ಹಚ್ಚಿಕೊಳ್ಳಬಹುದು.
https://isha.sadhguru.org/in/en/wisdom/article/sutra-more-than-a-thread
"ಆದಿಯೋಗಿಯ ಮಹತ್ವವೆಂದರೆ ಅವನು ಮಾನವ ಪ್ರಜ್ಞೆಯನ್ನು ವಿಕಸನಗೊಳಿಸುವ ನಿಟ್ಟಿನಲ್ಲಿ ಎಲ್ಲಾ ಕಾಲಕ್ಕೂ ಪ್ರಸ್ತುತವಾಗುವಂತಹ ವಿಧಾನಗಳನ್ನು ಒದಗಿಸಿದ್ದಾನೆ." – ಸದ್ಗುರು
15,000 ವರ್ಷಗಳ ಹಿಂದೆ, ಎಲ್ಲಾ ಮತಧರ್ಮಗಳಿಗೂ ಮುಂಚೆ, ಮೊದಲ ಯೋಗಿಯಾದ ಆದಿಯೋಗಿಯು ತನ್ನ ಏಳು ಶಿಷ್ಯರು ಅಂದರೆ ಸಪ್ತ ಋಷಿಗಳಿಗೆ ಯೋಗ ವಿಜ್ಞಾನವನ್ನು ಕಲಿಸಿಕೊಟ್ಟ. ಮಾನವರು ತಮ್ಮಲ್ಲಿನ ಮಿತಿಗಳನ್ನು ಮೀರಿ ತಮ್ಮ ಪರಮ ಸಾಮರ್ಥ್ಯವನ್ನು ತಲುಪುವ 112 ಮಾರ್ಗಗಳನ್ನು ವಿವರಿಸಿದ. ಆದಿಯೋಗಿಯ ಕೊಡುಗೆಗಳು ಆಂತರಿಕ ಪರಿವರ್ತನೆಗಾದ ಸಾಧನಗಳು, ಏಕೆಂದರೆ ಆಂತರಿಕ ಪರಿವರ್ತನೆಯೇ ಜಗತ್ತನ್ನು ಪರಿವರ್ತಿಸುವ ಏಕೈಕ ಮಾರ್ಗವಾಗಿದೆ. ಮಾನವನ ಯೋಗಕ್ಷೇಮ ಮತ್ತು ವಿಮೋಚನೆಗಾಗಿ “ಒಳಮುಖರಾಗುವುದೇ ಬಿಡುಗಡೆಯ ಏಕೈಕ ಮಾರ್ಗ” ಎಂಬುದು ಅವನ ಮೂಲ ಸಂದೇಶ.
ಸಾವಿರಾರು ವರ್ಷಗಳ ಹಿಂದೆ ಆದಿಯೋಗಿಯು ಮನುಕುಲಕ್ಕಾಗಿ ಕೊಟ್ಟ, ಸ್ವಯಂ ಪರಿವರ್ತನೆಯ ಸಾಧನಗಳನ್ನು, ಇವತ್ತಿನ ದಿನಕ್ಕೆ ಪ್ರಸ್ತುತ ಮಾತ್ರವಲ್ಲದೇ ಅತ್ಯವಶ್ಯಕವಾಗಿದೆ. ಈಶಾ ಯೋಗ ಕೇಂದ್ರದಲ್ಲಿರುವ 112 ಅಡಿ ಆದಿಯೋಗಿಯ ಮುಖವು ಎಲ್ಲರಿಗೂ ಇದರ ಪ್ರಬಲ ನೆನಪು ಮತ್ತು ಸ್ಫೂರ್ತಿಯಾಗಿ ನಿಂತಿದೆ.